ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ
         ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿ ಆರ್ಥಿಕವಾಗಿ ಹಿಂದುಳಿದವರಿಗೆ ವಿದ್ಯಾರ್ಥಿವೇತನ:

         ಶ್ರೀ ಗೋಕರ್ಣನಾಥ ಕ್ಷೇತ್ರದ ವಿದ್ಯಾನಿಧಿಯ ವತಿಯಿಂದ ಪಿಯುಸಿ/ಪದವಿ/ವೈದ್ಯಕೀಯ, ಎಂಜಿನಿಯರಿಂಗ್ ಶಿಕ್ಷಣ ವ್ಯಾಸಾಂಗ ಮಾಡುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಂದ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ವಿದ್ಯಾರ್ಥಿಗಳ ಹೆತ್ತವರ ವಾರ್ಷಿಕ ಆದಾಯ 1,00,000 ರೂ. ಮೀರಿರಬಾರದು ಅಥವಾ ಬಿ.ಪಿ.ಎಲ್. ಕಾರ್ಡ್ ಹೊಂದಿರಬೇಕು.

         ವಿದ್ಯಾಭ್ಯಾಸ ಮುಂದುವರಿಸುತ್ತಿರುವ ಅಗತ್ಯ ದಾಖಲೆ ಪತ್ರ, ವ್ಯಾಸಾಂಗ ಪ್ರಮಾಣಪತ್ರ ಲಗತ್ತಿಸಬೇಕು. 2018-19ರ ಸಾಲಿನಲ್ಲಿ ಪಿಯುಸಿ/ಪದವಿ/ವೈದ್ಯಕೀಯ, ಎಂಜಿನಿಯರಿಂಗ್ ನಲ್ಲಿ ಓದುವವರು ಹಿಂದಿನ ತರಗತಿಯಲ್ಲಿ ಶೇ. 90 ಕ್ಕಿಂತ ಹೆಚ್ಚು ಅಂಕ ಪಡೆದಿರಬೇಕು.

         ಬಿಲ್ಲವ ಸಮಾಜದ ವಿದ್ಯಾರ್ಥಿಗಳು ಶೇ. 85 ಕ್ಕಿಂತ ಮೇಲ್ಪಟ್ಟು ಅಂಕ ಹೊಂದಿರಬೇಕು. ಎಲ್ಲಾ ವಿದ್ಯಾರ್ಥಿಗಳು ದೃಢೀಕರಿಸಿದ ಅಂಕಪಟ್ಟಿ, ವ್ಯಾಸಾಂಗ ಪ್ರಮಾಣ ಪತ್ರ, ಜಾತಿ-ಆದಾಯ ದೃಢೀಕರಣ ಪತ್ರ, ಬೇರೆ ಸಂಘ ಸಂಸ್ಥೆಗಳಿಂದ ಪಡೆದುಕೊಂಡ ವಿದ್ಯಾರ್ಥಿ ವೇತನದ ವಿವರ ಹಾಗೂ ಬಿಲ್ಲವ ಸಮಾಜದ ವಿದ್ಯಾರ್ಥಿಗಳು ಆಯಾ ಊರಿನ ಬಿಲ್ಲವ ಸಂಘದ ದೃಢೀಕರಣ ಪತ್ರದೊಂದಿಗೆ ದಿನಾಂಕ 20-07-2018 ರ ಒಳಗೆ ಅರ್ಜಿಯನ್ನು ಅಧ್ಯಕ್ಷರು, ಶ್ರೀ ಗೋಕರ್ಣನಾಥ ಕ್ಷೇತ್ರ, ಕುದ್ರೋಳಿ, ಮಂಗಳೂರು, ಇವರಿಗೆ ತಲುಪುವಂತೆ ಅಥವಾ ವೈಯುಕ್ತಿಕವಾಗಿ ಸಲ್ಲಿಸಬಹುದು, ಅರ್ಜಿಗಳಿಗೆ ಸ್ವೀಕೃತಿ ಪತ್ರ ನೀಡಲಾಗುವುದು ಎಂದು, ಶ್ರೀ ಗೋಕರ್ಣನಾಥ ಕ್ಷೇತ್ರ, ಕುದ್ರೋಳಿ ಪ್ರಕಟಣೆಯಲ್ಲಿ ತಿಳಿಸಿದೆ.

SCHOLORSHIP FORM
          Full Name  *
          DOB *
          Gender *
          Phone no 1 * 
          Phone no 2
          City *
          Address *  
          Email-id *
          Course Completed *
          Marks in % *
          University/College *
          Passed out year
          Student Photo *
          BPL Card Photo *
          Course Opted
          Religion *
          Caste
          Scholorship Certificate if obtained any
       
           Enter Captcha shown above *